ಶ್ರೀ ವೈಷ್ಣವ ಸೇವಾ ಸಮಿತಿ ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀವೈಷ್ಣವರ ಒಂದು ಒಕ್ಕೂಟ. ಜಾತವಾರದ ಶ್ರೀ ಪ್ರಸನ್ನ ಕೇಶವ ದೇವಸ್ಥಾನ ಇದರ ಕೇಂದ್ರ ಬಿಂದು. ಶ್ರೀವೈಷ್ಣವ ಸಿದ್ದಾಂತವಾದ ವಿಶಿಷ್ಟಾದ್ವೈತ, ಭಗವದ್ ಶ್ರೀ ರಾಮಾನುಜಾಚಾರ್ಯರ ಬೋಧನೆ, ನಮ್ಮ ಸಂಪ್ರದಾಯ ಮತ್ತು ನಮ್ಮ ಶ್ರೀವೈಷ್ಣವ ಬಂಧುಗಳ ನಡುವಿನ ಆಗುಹೋಗು ವಿಷಯಗಳನ್ನು ಎಲ್ಲಾ ಸದಸ್ಯರಿಗೆ ತಿಳಿಸುವ ಉದ್ದೇಶದಿಂದ ಸ್ಥಾಪಿಸಲಾದ ಸಮಿತಿಯು ಇದೆಲ್ಲವನ್ನು ನಿಷ್ಠೆಯಿಂದ ನಡೆಸಿಕೊಂಡು ಬರುತ್ತಿದೆ.
ಜಾತವಾರ ಸುತ್ತಮುತ್ತಲಿನ ಗ್ರಾಮ ಮತ್ತು ಹಳ್ಳಿಗಳಲ್ಲಿ ಹಲವಾರು ಶ್ರೀವೈಷ್ಣವ ಕುಟುಂಬಗಳು ವಾಸವಿದ್ದು ಇವರೆಲ್ಲರನ್ನು ಒಗ್ಗೂಡಿಸುವ ಕೆಲಸವನ್ನು ಸಮಿತಿಯು ಮಾಡುತ್ತಾ ಬಂದಿದೆ. ನಮ್ಮ ಹಿರಿಯರು ೨೦೦೮ ರಲ್ಲಿ ಈ ಸಮಿತಿಯನ್ನು ಪ್ರಾರಂಭಿಸಿ ಇದನ್ನು ನೋಂದಾಯಿಸಿದರು. ಹಲವಾರು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಅದನ್ನು ಕಾರ್ಯಗತಗೊಳಿಸುತ್ತಾ ಬಂದಿರುವ ಕೆಲವನ್ನು ಕೆಳಗೆ ತಿಳಿಹೇಳಲಾಗಿದೆ.